My post content
Satwik Food
ಸಾತ್ವಿಕ ಆಹಾರ ಪದ್ಧತಿ: ಈ ಆಹಾರ ತೆಗೆದುಕೊಂಡರೆ, ದೇಹದ ರೋಗ ನಿರೋಧಕ ಶಕ್ತಿ ವೃದ್ಧಿ. ಏನಿದು ಸಾತ್ವಿಕ ಆಹಾರ ಅಂತೀರಾ?. ನಮ್ಮ ಆಹಾರ ಸೇವನೆಯಲ್ಲಿ ಹಲವಾರು ವಿಧಾನಗಳಿವೆ. ಒಬ್ಬೊಬ್ಬರು ಒಂದೊಂದು ಆಹಾರ ಪದ್ದತಿಯನ್ನು ಇಷ್ಟ ಪಡುತ್ತಾರೆ. ಆದರೆ ಎಲ್ಲದಕ್ಕಿಂತ ಸಾತ್ವಿಕ ಆಹಾರ ಪದ್ಧತಿ ತುಂಬಾ ಪ್ರಚಲಿತ ಪಡೆದಿದೆ. ಏಕೆಂದರೆ ಇದರ ಸರಳ ಗುಣ ಲಕ್ಷಣಗಳು, ಜನರಿಗೆ ಇದರಿಂದ ಸಿಗುವ ಒಳ್ಳೆಯ ಆರೋಗ್ಯಕರ ಜೀವನ ಹಾಗು ಯಾವುದೇ ಬಗೆಯ ರೋಗಲಕ್ಷಣಗಳು ಇದರ ಪ್ರಭಾವದಿಂದ ಅತ್ಯಂತ ವೇಗವಾಗಿ ಮತ್ತು ತುಂಬಾ ಪರಿಣಾಮಕಾರಿಯಾಗಿ ಗುಣ ಆಗುವ ಕಾರಣದಿಂದ ಸಾತ್ವಿಕ ಆಹಾರ ಪದ್ಧತಿ ತುಂಬಾ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ವ್ಯಕ್ತಿಗಳು ತಿನ್ನುವ ಆಹಾರವು ಅವರ ಆಲೋಚನಾ ಪ್ರಕ್ರಿಯೆಗಳು ಮತ್ತು ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಮತ್ತು ಪ್ರತಿಯಾಗಿ. ಭಗವದ್ಗೀತೆಯ ಪ್ರಕಾರ, ಒಬ್ಬ ವ್ಯಕ್ತಿಯು ಸೇವಿಸುವ ಆಹಾರವು ಅವರ ಆಲೋಚನೆಗಳು, ಸ್ವಭಾವ, ಮಾನಸಿಕ ಯೋಗಕ್ಷೇಮ ಮತ್ತು ಆರೋಗ್ಯದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಭಗವದ್ಗೀತೆ 17.7 ಆಹಾರದ ಮಹತ್ವವನ್ನು ಉಲ್ಲೇಖಿಸುತ್ತದೆ. ತುಂಬಾ ಜನರಿಗೆ ಯಾವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು ಮತ್ತು ಯಾವ ಆಹಾರವನ್ನು ಸೇವಿಸಿದರೆ ನಮ್ಮ ದೇಹಕ್ಕೆ ಕಿಂಚಿತ್ತೂ ಲಾಭವಿಲ್ಲ ಎನ್ನುವುದರ ಬಗ್ಗೆ ಅನೇಕ ಗೊಂದಲಗಳಿರುತ್ತವೆ. ಇಂತವರು ಯಾವುದೋ ಕರಿದಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿಂದು ತಮ್ಮ ಆರೋಗ್ಯವನ್ನು ಹದಗೆಡಿಸಿ ಕೊಳ್ಳುವುದಕ್ಕಿಂತ, ಸಾತ್ವಿಕ ಆಹಾರವನ್ನು ರೂಢಿಸಿಕೊಳ್ಳುವುದು ಉತ್ತಮ ಅನ್ನಿಸುತ್ತದೆ. ಹಾಗಾದರೆ ಈ ಸಾತ್ವಿಕ ಆಹಾರ ಹಾಗೂ ಅದರ ಸೇವನೆಯಿಂದ ದೇಹಕ್ಕೆ ಉಂಟಾಗುವ ಪ್ರಯೋಜನಗಳನ್ನು ಕುರಿತು ಅರಿತುಕೊಳ್ಳೋಣ. ಏನಿದು ಸಾತ್ವಿಕ ಆಹಾರ ಅಂತೀರಾ? ಸಾತ್ವಿಕ ಆಹಾರವು ಆಯುರ್ವೇದದ ಅಂಶಗಳನ್ನು ಆಧರಿಸಿದ ಶುದ್ಧ ಸಸ್ಯಾಹಾರವಾಗಿದೆ. ಈ ಆಹಾರದಲ್ಲಿ ಫೈಬರ್ ಅಂಶ ಜಾಸ್ತಿ ಇದ್ದು, ಕೊಬ್ಬಿನಾಂಶವು ತುಂಬಾ ಕಡಿಮೆ ಇರುತ್ತದೆ. ಇಂತಹ ಆಹಾರವು ನಮ್ಮನ್ನು ದೈಹಿಕವಾಗಿ ಆರೋಗ್ಯವಾಗಿ ಇರಿಸುವುದಲ್ಲದೆ, ಮಾನಸಿಕ ಆರೋಗ್ಯಕ್ಕೂ ತುಂಬಾ ಸಹಾಯಕವಾಗಿದೆ. ಸಾತ್ವಿಕ ಆಹಾರ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತವೆ. ಈ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಂಡರೆ, ನಮ್ಮ ದೇಹಕ್ಕೆ ಹೆಚ್ಚಿನ ಫೈಬರ್, ಪೌಷ್ಟಿಕಾಂಶ ಲಭಿಸುತ್ತದೆ ಮತ್ತು ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಸತ್ವ ಎನ್ನುವ ಪದದಿಂದ ಸಾತ್ವಿಕ ಎನ್ನುವುದು ಬಂದಿದೆ. ಇದರರ್ಥ ಶುದ್ಧ, ಶಕ್ತಿ, ಸ್ವಚ್ಛ ಮತ್ತು ಬಲಿಷ್ಠ ಎಂದು ಹೇಳಬಹುದು. ಸೂಕ್ಷ್ಮಪೋಷಕಾಂಶಗಳಿಂದ ಸಮೃದ್ಧವಾಗಿರುವಂತಹ ಸಾತ್ವಿಕ ಆಹಾರದ ಬಗ್ಗೆ ಯೋಗದಲ್ಲೂ ಹೇಳಲಾಗಿದೆ. ಇದರಲ್ಲಿ ಸ್ವಚ್ಛ ಆಹಾರವನ್ನು ಪ್ರೋತ್ಸಾಹಿಸಲಾಗುತ್ತದೆ. ದೈಹಿಕ ಬಲ ಹೆಚ್ಚಿಸುವುದು, ಒಳ್ಳೆಯ ಆರೋಗ್ಯ ಹಾಗೂ ದೀರ್ಘ ಜೀವನ ನೀಡುವುದು. ಇದು ತಿನ್ನುವ ಆಹಾರದತ್ತ ಗಮನಹರಿಸುವುದು ಅಥವಾ ಭಾವನೆಗಳನ್ನು ಸಮತೋಲನದಲ್ಲಿ ಇಡುವ, ದೇಹದಿಂದ ವಿಷಕಾರಿ ಅಂಶ ಹೊರಹಾಕುವ, ಶಕ್ತಿ ನೀಡುವಂತಹ ಜೀವನ ಕ್ರಮವಾಗಿದೆ. ಇದು ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಸುವುದು. ಆಹಾರ ಮತ್ತು ಗುಣಗಳು: ಗುಣ ಎಂದರೇನು? ಮೂರು ಗುಣಗಳು ಪಾರ್ಕೃತಿಯಲ್ಲಿನ ಶಕ್ತಿಯ ವಿವಿಧ ಗುಣಗಳ ಗುಂಪುಗಳಾಗಿವೆ (ಭೌತಿಕ ವಿಷಯ.) ಯಾವುದೇ ಜೀವಿಯು ಗುಣಗಳನ್ನು ಹೊಂದಿರುತ್ತದೆ ಮತ್ತು ಇದು ಮನಸ್ಸು, ದೇಹ ಮತ್ತು ಆತ್ಮ ಅಥವಾ ಪ್ರಜ್ಞೆಯ ಮೂರು "ಒಲವು" ಗಳಲ್ಲಿ ಒಂದಾಗಿದೆ. ಮೂರು ಗುಣಗಳೆಂದರೆ ಸತ್ವ, ರಜಸ್ ಮತ್ತು ತಾಮಸ ಗುಣಗಳು. ಈ ವರ್ಗಗಳು ನಮ್ಮ ಆರೋಗ್ಯ, ನಡವಳಿಕೆ, ಆಲೋಚನೆ ಮತ್ತು ಆಹಾರಕ್ರಮವನ್ನು ವ್ಯಾಖ್ಯಾನಿಸುತ್ತವೆ ಮತ್ತು ಪ್ರತಿಬಿಂಬಿಸುತ್ತವೆ. ಸಾತ್ವಿಕ ಆಹಾರವು ಸತ್ವ ಎಂದು ಕರೆಯಲ್ಪಡುವ ಮೂರು ಯೋಗ ಗುಣಗಳಲ್ಲಿ ಒಂದನ್ನು ( ಗುಣ ) ಒಳಗೊಂಡಿರುವ ಆಹಾರವನ್ನು ಆಧರಿಸಿದ ಆಹಾರವಾಗಿದೆ . ಆಹಾರ ವರ್ಗೀಕರಣದ ಈ ವ್ಯವಸ್ಥೆಯಲ್ಲಿ, ದೇಹದ ಶಕ್ತಿಯನ್ನು ಕಡಿಮೆ ಮಾಡುವ ಆಹಾರವನ್ನು ತಾಮಸಿಕ್ ಎಂದು ಪರಿಗಣಿಸಲಾಗುತ್ತದೆ , ಆದರೆ ದೇಹದ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ರಾಜಸಿಕ್ ಎಂದು ಪರಿಗಣಿಸಲಾಗುತ್ತದೆ . ಆಧುನಿಕ ಸಾಹಿತ್ಯದಲ್ಲಿ ಸಾತ್ವಿಕ ಆಹಾರವನ್ನು ಕೆಲವೊಮ್ಮೆ ಯೋಗದ ಆಹಾರ ಎಂದು ಕರೆಯಲಾಗುತ್ತದೆ. ನಾವು ತಿನ್ನುವ ಆಹಾರಗಳು ದೈಹಿಕ, ಭಾವನಾತ್ಮಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿ ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಆಧ್ಯಾತ್ಮಿಕ ಮಾರ್ಗದ ಸಾಕ್ಷಾತ್ಕಾರದ ಕಡೆಗೆ ಮುನ್ನಡೆಯಲು ಆಹಾರಕ್ರಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾತ್ವಿಕ ಆಹಾರ ಪದ್ಧತಿಯಲ್ಲಿ ತುಂಬ ಸರಳವಾದ ಜೀವನ ಶೈಲಿಯ ಪದ್ಧತಿ ಅನುಸರಣೆ ಆಗುವುದರಿಂದ ಕಾಲಕಾಲಕ್ಕೆ ಒದಗುವ ತಾಜಾ ಹಣ್ಣು - ತರಕಾರಿಗಳು, ಕಾಳುಗಳು, ದ್ವಿದಳ ಧಾನ್ಯಗಳು, ಮೊಳಕೆ ಕಾಳುಗಳು, ಒಣಗಿದ ಬೀಜಗಳು, ಜೇನು ತುಪ್ಪ, ತಾಜಾ ಗಿಡಮೂಲಿಕೆಗಳು, ಹಾಲು ಮತ್ತು ಇನ್ನಿತರ ಡೈರಿ ಉತ್ಪನ್ನಗಳು, ಇತ್ಯಾದಿ ಎಲ್ಲವೂ ಸಹ ನಮ್ಮ ದೇಹಕ್ಕೆ ಸಾಕಷ್ಟು ಒಳ್ಳೆಯ ಆರೋಗ್ಯ ಲಾಭಗಳನ್ನು ತಂದು ಕೊಡುವಂತಹ ಆಹಾರಗಳೇ ಆಗಿರುತ್ತವೆ. ದೇಹದ ತೂಕ ನಿರ್ವಹಣೆ ಸಾತ್ವಿಕ ಆಹಾರದಲ್ಲಿ ನಾರಿನ ಅಂಶ ಮತ್ತು ಸಸ್ಯಗಳ ಸಂಬಂಧಿತ ಆಹಾರ ಹೆಚ್ಚಾಗಿರುವು ದರಿಂದ, ಒಬ್ಬ ಮನುಷ್ಯನ ದೇಹದ ಅಧಿಕ ತೂಕವನ್ನು ಅತ್ಯಂತ ಪರಿಣಾಮಕಾರಿಯಾಗಿ ಅಷ್ಟೇ ವೇಗವಾಗಿ ಕಡಿಮೆ ಮಾಡಬಲ್ಲ ಗುಣ ಲಕ್ಷಣಗಳಿವೆ. ಹಲವಾರು ಅಧ್ಯಯನಗಳು ಹೇಳಿರುವ ಹಾಗೆ ಮಾಂಸಾಹಾರಕ್ಕಿಂತ ಸಸ್ಯಾಹಾರ ಸೇವನೆ ದೇಹದ ಮಾಂಸ ಖಂಡಗಳ ಪ್ರಮಾಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ದೇಹದಲ್ಲಿ ಹೆಚ್ಚಿರುವ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸುತ್ತದೆ. ಖಾಲಿ ಹೊಟ್ಟೆಗೆ ಇಂತಹ ಆಹಾರಗಳನ್ನು ತಿಂದರೆ, ದೇಹದ ತೂಕ ಇಳಿಯುವುದು! ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ ಸಾತ್ವಿಕ ಆಹಾರದಲ್ಲಿ ಹೆಚ್ಚು ಪೌಷ್ಟಿಕಾಂಶಗಳುಳ್ಳ ಆಹಾರ ಪದ್ಧತಿ ಸೇರಿರುವುದರಿಂದ ನಮ್ಮ ದೇಹಕ್ಕೆ ಸಾತ್ವಿಕ ಆಹಾರ ಸೇವಿಸುವ ನಿಟ್ಟಿನಲ್ಲಿ ನಾವು ಹಲವು ಬಗೆಯ ವಿಟಮಿನ್ ಅಂಶಗಳು, ಖನಿಜಾಂಶಗಳು, ಆಂಟಿ - ಆಕ್ಸಿಡೆಂಟ್ ಅಂಶಗಳು ಪ್ರೋಟೀನ್ ಅಂಶಗಳು ಮತ್ತು ಆರೋಗ್ಯಕರ ಕೊಬ್ಬಿನ ಅಂಶಗಳನ್ನು ಸೇರಿಸುತ್ತಾ ಹೋಗುತ್ತೇವೆ. ಇದು ನಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸಿ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತವೆ. ಸಾತ್ವಿಕ ಆಹಾರ ನಮ್ಮ ಸಂಪೂರ್ಣ ಆರೋಗ್ಯವನ್ನು ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಪೌಷ್ಟಿಕಾಂಶ ಭರಿತ ಆಹಾರಗಳನ್ನು ನಮ್ಮ ದೇಹಕ್ಕೆ ಸೇರಿಸುವ ಮೂಲಕ ನಮ್ಮ ಕ್ಯಾನ್ಸರ್ ಮತ್ತು ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಸಾತ್ವಿಕ ಆಹಾರದ ಕೊಡುಗೆ ಬಹಳಷ್ಟಿದೆ. ಯಾವ ಆಹಾರಗಳನ್ನು ತಿನ್ನಬಾರದು ? ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸುತ್ತಿರುವ ಜನರು ಈ ಕೆಳಗಿನ ಆಹಾರಗಳನ್ನು ಸೇವಿಸಬಾರದು ಎಂದು ತಿಳಿಸಲಾಗಿದೆ. ಆಹಾರಗಳಿಗೆ ಸಕ್ಕರೆ ಅಂಶಗಳನ್ನು ಸೇರಿಸಿದ ವಿಚಾರವಾಗಿ ನಾವು ಮನೆಯಲ್ಲಿ ಬಳಸುವ ಸಕ್ಕರೆ, ಹೆಚ್ಚಿನ ಫ್ರಕ್ಟೋಸ್ ಅಂಶವನ್ನು ಹೊಂದಿರುವ ಕಾರ್ನ್ ಸಿರಪ್, ಕ್ಯಾಂಡಿ ಮತ್ತು ಸೋಡಾ ಕರಿದ ಆಹಾರ ಪದಾರ್ಥಗಳು ಫ್ರೆಂಚ್ ಫ್ರೈಸ್, ಫ್ರೈಡ್ ವೆಜಿಟೇಬಲ್ಸ್, ಫ್ರೈಡ್ ಪೇಸ್ಟ್ರಿ ಇತ್ಯಾದಿ. ಸಂಸ್ಕರಿಸಿದ ಆಹಾರಗಳು : - ಚಿಪ್ಸ್, ಫಾಸ್ಟ್ ಫುಡ್, ಮೈಕ್ರೋವೇವ್ ನಲ್ಲಿ ತಯಾರು ಮಾಡಿದ, ಫ್ರೋಜ್ ಮಾಡಿದ ಆಹಾರ ಇತ್ಯಾದಿ. ರಿಫೈನ್ ಮಾಡಿದ ಕಾಳುಗಳ ಉತ್ಪನ್ನಗಳು : - ಬಿಳಿ ಬ್ರೆಡ್, ಕೇಕ್, ಕುಕೀಸ್ ಇತ್ಯಾದಿ ಪ್ರಾಣಿಯ ಮಾಂಸಾಹಾರಗಳು : - ಮೀನು, ಕೋಳಿ ಮೊಟ್ಟೆ, ಚಿಕನ್ ಇತ್ಯಾದಿ ಕೆಲವು ಹಣ್ಣು - ತರಕಾರಿಗಳು : - ಈರುಳ್ಳಿ ಉಪ್ಪಿನಕಾಯಿ ಬೆಳ್ಳುಳ್ಳಿ ಕೆಲವು ಪಾನೀಯಗಳು : - ಕಾಫಿ, ಆಲ್ಕೋಹಾಲ್, ಸಕ್ಕರೆ ಸೇರಿಸಿದ ಪಾನೀಯಗಳು ಇತ್ಯಾದಿ ನೆನಪಿಡಬೇಕಾದ ಅಂಶಗಳು ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸುತ್ತಿರುವ ಜನರು ಈ ಒಂದು ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
9/15/2022